ನೀರ್ಜಾ ಮಾಧವ್ ಉತ್ತರ ಪ್ರದೇಶದ ಭಾರತೀಯ ಲೇಖಕಿ,ಇವರು ಹಿಂದಿಯಲ್ಲಿ ಬರೆಯುತ್ತಿದ್ದಾರೆ . 2021 ರಲ್ಲಿ ನಾರಿ ಶಕ್ತಿ ಪುರಸ್ಕಾರವನ್ನು ಪಡೆದುಕೊಂಡರು . == ವೃತ್ತಿ == ಮಾಧವ್ ಅವರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಹಿಂದಿಯಲ್ಲಿ ಬರೆಯುತ್ತಾರೆ. ಅವರ ಪುಸ್ತಕಗಳಲ್ಲಿ ಯಮದೀಪ್ (2002), ಗೆಶೆ ಜಂಪಾ (2006) ಮತ್ತು ಡೈರಿ ಆಫ್ 5-ಅವರ್ಣ ಮಹಿಳಾ ಕಾನ್ಸ್‌ಟೇಬಲ್ (2010) ಸೇರಿವೆ. ಯಮದೀಪ್ ಅವರ ಕಾದಂಬರಿಯು ತೃತೀಯಲಿಂಗಿಗಳಿಗೆ ಸಂಬಂಧಿಸಿದೆ ಮತ್ತು ಮಾಧವ್ ಅವರು ತೃತೀಯಲಿಂಗಿ ಹಕ್ಕುಗಳಿಗಾಗಿ ಪ್ರಚಾರ ಮಾಡಲು ಕಾರಣವಾಯಿತು. ಸುಪ್ರೀಂ ಕೋರ್ಟ್ ಅಂತಿಮವಾಗಿ ೨೦೧೪ ರಲ್ಲಿ ಮೂರನೇ ಲಿಂಗದ ಮಾನವ ಹಕ್ಕುಗಳನ್ನು ಗುರುತಿಸಿತು. "ಗೆಶೆ ಜಂಪಾ"ವು ಭಾರತದಲ್ಲಿ ಟಿಬೆಟಿಯನ್ ನಿರಾಶ್ರಿತರ ಕುರಿತು ಇರುವುದು ಮತ್ತು ವಾರಣಾಸಿಯ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್‌ನ ಪಠ್ಯಕ್ರಮದಲ್ಲಿ ಇದನ್ನು ಕಲಿಸಲಾಗುತ್ತದೆ. ಮಾಧವ್ ಅವರಿಗೆ ೨೦೨೧ ರ ನಾರಿ ಶಕ್ತಿ ಪುರಸ್ಕಾರವನ್ನು 2022 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೀಡಿದರು . == ಉಲ್ಲೇಖಗಳು ==